ಎರಗಿ ಬಿನ್ನಾ ಮಾಡದ್ಹೋದರು

ಎರಗಿ ಬಿನ್ನಾ ಮಾಡದ್ಹೋದರು
ಗುರುವರನ ಗಣರಿಗೆರಗಿ
ಬಿನ್ನಾ ಮಾಡದ್ಹೋದರು
ನರಗುರಿಗಳು ಪರಿಹಾಸ್ಯದಿ
ಜರಿದರು ಎನ್ನ ಕರೆಸಿದರೈ
ಹರನ ಶಾಸ್ತ್ರಕೆ ವರಪ್ರಸ್ತಕೆ
ಮರಿತರು ನಿಮಗರಿಕಿರಲೈ ||ಪ||

ಹಿಂದಕ್ಕೊಮ್ಮೆ ಪ್ರಥಮರೊಡನೆ
ದ್ವಂದ್ವ ಬಯಸಿ ರೇಚಿತಂದೆ
ಒಂದು ಕರಿಯ ಎಲಿಯ ಕೊಟ್ಟ
ಇಂದು ಪಥಕೆ ಮುಟ್ಟಲಿಲ್ಲಾ
ಅಂದಿನ ಕಥೆ ಇಂದರಿಯದೆ
ಬಂಧನಕ್ಕೊಳಗಾಗುವರೆ
ಕುಂದಿಟ್ಟರು ನಿಂದಿಸುತಲಿ
ಮಂದಾತ್ಮರು ಮಹಾಗರ್ವದಿ ||೧||

ನಿಷ್ಟಿ ಹಿಡಿದು ನಿಜಗ ನಿಲ್ಲದೆ
ಇಷ್ಟಲಿಂಗದ ಅರವು ಇಲ್ಲದೆ
ಶ್ರೇಷ್ಟ ಭಲಾ ಶಿವ ಜಂಗಮ-
ರಿಷ್ಟು ಬಳಲಿಸಿರುವರಿವರು
ಕೆಟ್ಟರು ಕುಚೇಷ್ಟರು
ಬ್ರಷ್ಟರು ಮಹಾಗರ್ವಿಷ್ಟರು
ತಟ್ಟಲೀ ಪಾಪ ಅವರಿಗೆ
ಕುಟ್ಟಲೀ ಶಿವಾ ಕುಟ್ಟಲೀಗ ||೨||

ಪೃಥ್ವಿಪಾಲ ಶಿಶುವಿನಾಳ
ಸತ್ಯಶರಣ ಸಖನ
ಕೃತ್ಯ ಕಪಟ ಬಯಸಿದವರು
ಕತ್ತಿ ಜನ್ಮಕೆ ಹೋಗುತಿಹರು ಚಿತ್ತೈಸಿರಿ
ಅರ್ತಿಯಲಿ ಚಿತ್ತೈಸಿರಿ ಇದನರಿತು
ಮತ್ತೆ ಕಳಸದ ಗ್ರಾಮಕೆ
ಪ್ರಸ್ತವಾಯಿತೋ ಭಕ್ತಿಯಲಿ ||೩||

****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಾರದಿರುವೆರೇನೇ ಭಾಮಿನಿ
Next post ತೋಟವ ನೋಡಿರಯ್ಯಾ

ಸಣ್ಣ ಕತೆ

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

cheap jordans|wholesale air max|wholesale jordans|wholesale jewelry|wholesale jerseys